ರೋಹಿತ್ ಶರ್ಮಾ ಆಭಿಮಾನಿಗಳಿಗೆ ಗುಡ್ ನ್ಯೂಸ್ ವಿಶ್ವಕಪ್ ಬಳಿಕ ಮತ್ತೊಂದು ಸಾಧನೆ



ರೋಹಿತ್ ಶರ್ಮಾ ಭಾರತ ಕ್ರಿಕೆಟ್ ಲೋಕದ ಧ್ರುವತಾರೆ. ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ಭಾರತೀಯರ ಪಾಲಿಗೆ ನೆಚ್ಚಿನ ನಾಯಕನಾದ ರೋಹಿತ್ ಶರ್ಮಾ ಆನೇಕ ದಾಖಲೆಗಳ ಸರದಾರ. ಸದ್ಯ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ ವಿದಾಯ ಹೇಳಿದ್ದರು ಏಕದಿನ ಪಂದ್ಯದಲ್ಲಿ ಟಿ೨೦ ಮಾದರಿ ಬ್ಯಾಟಿಂಗ್ ಮಾಡುವ ಮೂಲಕ ಐಸಿಸಿ ರ್ಯಾಕಿಂಗ್ ನಲ್ಲಿ ೨ನೇ ಸ್ಥಾನವನ್ನು ಆಲಂಕರಿಸಿರುವುದು ಅವರ ಖ್ಯಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಸದ್ಯ ಭಾರತ ಭಾಂಗ್ಲಾದೇಶದ ಜೊತೆಗೆ ಕೆಲವು ಸರಣಿಗಳನ್ನು ಆಡಲಿದೆ.

ಮುಂದಿನ ವರ್ಷದ ಐಪಿಎಲ್ ಗೆ ಮಾಲೀಕರು ಈಗಲೇ ತಯಾರಿಯನ್ನು ಆರಂಭಿಸಿದ್ದಾರೆ ಮಾತ್ರವಲ್ಲದೆ ಲೆಕ್ಕಾಚಾರಗಳ ಗೇಮ್ ಪ್ಲಾನ್ ಈಗಾಗಲೇ ಆರಂಭವಾಗಿದೆ ಇದರ ಮಧ್ಯೆ ರೋಹಿತ್ ಶರ್ಮಾ ಆಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ.

ಕಳೆದ ಬಾರಿಯ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು ಮಾತ್ರವಲ್ಲದೆ ಈ ಬಗ್ಗೆ ಭಾರೀ ಟೀಕೆಗಳನ್ನು ಆ ತಂಡದ ಮಾಲೀಕರು ಎದುರಿಸಬೇಕಾಯಿತು ಅದರೆ ಬಳಿಕ ವಿಶ್ವಕಪ್ ಗೆಲ್ಲುವ ಮೂಲಕ ನಾನು ಕೂಡ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ನಾಯಕ ಎಂದು ಎಲ್ಲಾರಿಗೂ ತೋರಿಸಿಕೊಟ್ಟರು ಸದ್ಯ ಅದೇ ವಿಶ್ವಕಪ್ ಗೆದ್ದ ನಾಯಕನನ್ನು ಮುಂಬೈ ತಂಡ ನಾಯಕನಾಗಿ ಕಣಕ್ಕೆ ಇಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾರ್ದಿಕ್ ಪಾಂಡ್ಯಾಗೆ ಕೋಕ್ ನೀಡುವ ಮೂಲಕ ಹೊಸ ಪ್ಲಾನ್ ಗೆ ಸಿದ್ದವಾಗಿದೆ ಎನ್ನಲಾಗುತ್ತಿದೆ


Comments