ರಾಹುಲ್ ದ್ರಾವಿಡ್ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ 'ದಿ ವಾಲ್' ಎಂದೇ ಖ್ಯಾತಿ ಪಡೆದಿರುವ ಇವರು ಕನ್ನಡಿಗರಾದರು ಇವರು ಜನಿಸಿದ್ದು ಮಧ್ಯಪ್ರದೇಶದ ಇಂಧೋರ್ ನಲ್ಲಿ. ವರ್ಷಗಳ ಬಳಿಕ ಇವರ ತಂದೆ-ತಾಯಿ ಕರ್ನಾಟಕಕ್ಕೆ ಆಗಮಿಸಿದ್ದರಿಂದ ನಂತರ ಇವರು ಕರ್ನಾಟಕದವರಾಗಿ ಖ್ಯಾತಿ ಪಡೆದರು. ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲಾ ರೀತಿಯಲ್ಲೂ ಸೇವೆ ಸಲ್ಲಿಸಿರುವ ಇವರು ಒರ್ವ ಉತ್ತಮ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದರು ಅದರೆ ಒಂದು ವಿಶ್ವಕಪ್ ಎತ್ತಿ ಹಿಡಿಯಲು ಆಗಲಿಲ್ಲ ಎಂಬ ನೋವು ಇವರನ್ನು ಸದಾ ಕಾಡುತಿತ್ತು.
ವಿಶ್ವಕಪ್ ಎನ್ನುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ ಮಾತ್ರವಲ್ಲದೆ ಒಂದು ಬಾರಿಯಾದರು ವಿಶ್ವಕಪ್ ಗೆದ್ದು ನಮ್ಮ ಹೆಸರನ್ನು ವಿಶ್ವಗೆದ್ದ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು ಎಂಬುದು ಎಲ್ಲಾರ ಆಸೆಯಾಗಿರುತ್ತದೆ ಅದರೆ ಈ ಕನಸು ರಾಹುಲ್ ದ್ರಾವಿಡ್ ಅವರ ಪಾಲಿಗೆ ನನಸಾಗಲಿಲ್ಲ. ಯಾವುದಾದರೂ ನಮ್ಮಿಂದ ಕಾರ್ಯ ಆಗಬೇಕು ಎಂದು ದೇವರು ನಿಶ್ಚಯಿಸಿದ್ದಾರೆ ಅದು ಆಗಿಯೇ ಆಗುತ್ತದೆ ಎಂಬುದಕ್ಕೆ ದ್ರಾವಿಡ್ ನೈಜ ಉದಾಹರಣೆ.
ಭಾರತೀಯ ಆಟಗಾರನಾಗಿ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿಯಾದ ರಾಹುಲ್ ದ್ರಾವಿಡ್ ಅವರಿಗೆ ೨೦೨೧ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಒದಗಿ ಬಂತು ಮಾತ್ರವಲ್ಲದೆ ವಿಶ್ವಕಪ್ ಪಂದ್ಯಗಳಲ್ಲಿ ಕೋಚ್ ಆಗಿ ಕಾರ್ಯವನ್ನು ಮಾಡಿದರು ಅದರೆ ೨೦೨೩ರಲ್ಲಿ ಭಾರತದಲ್ಲಿಯೇ ನಡೆದ ವಿಶ್ವಕಪ್ ಏಕದಿನ ಟೂರ್ನಿಯಲ್ಲಿ ಭಾರತ ಫೈನಲ್ ನಲ್ಲಿ ವಿರೋಚಿತವಾಗಿ ಸೋಲುವ ಮೂಲಕ ವಿಶ್ವಕಪ್ ಗೆಲ್ಲುವ ಮೂಲಕ ಕನಸು ನೂಚ್ಚುನೂರಾಯಿತು. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತಿತ್ತು ಅದರೆ ದೇವರ ಆಟವೇ ಬೇರೆಯಾಗಿತ್ತು. ದ್ರಾವಿಡ್ ಅವರ ಕೋಚ್ ಹುದ್ದೆಯ ಅಧಿಕಾರದ ಅವಧಿಯನ್ನು ಟಿ೨೦ ವಿಶ್ವಕಪ್ ವರೆಗೆ ಮುಂದುವರಿಸಲಾಗಿತ್ತು ಇದರ ಬಳಿಕ ನಡೆದದ್ದು ಇತಿಹಾಸ. ಆಟಗಾರನಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೆ ಇದ್ದರು ಕೋಚ್ ಆಗಿ ಆ ಕಾರ್ಯವನ್ನು ರಾಹುಲ್ ದ್ರಾವಿಡ್ ಮಾಡುವ ಮೂಲಕ ತಮ್ಮ ದಶಕಗಳ ಕನಸನ್ನು ನನಸು ಮಾಡಿಕೊಂಡರು.
ವಿಶ್ವಕಪ್ ಗೆದ್ದ ಬಳಿಕ ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ನಿವೃತ್ತಿಯಾದರು ಮಾತ್ರವಲ್ಲದೆ ಭಾರತ ಮಾಜಿ ಆರಂಭಿಕ ಆಟಗಾರ ಗೌತಮ ಗಂಭೀರ್ ಈ ಸ್ಥಾನಕ್ಕೆ ಆಯ್ಕೆಯಾದರು ಸದ್ಯ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಎಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಅಗು ಈ ಹಿಂದೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಕೋಚ್ ಗಳ ಸಾಧನೆ ಏನು ಎಂಬುದರ ಬಗ್ಗೆ ಅಂಕಿ ಅಂಶಗಳು ಲಭ್ಯವಾಗಿದೆ ಇದರೆ ರಾಹುಲ್ ದ್ರಾವಿಡ್ ಅವರ ಸಾಧನೆ ಮತ್ತೊಂದು ಹೊಸ ದಾಖಲೆಯಾಗಿದೆ ಮಾತ್ರವಲ್ಲದೆ ಇದು ಅವರ ಕಠಿಣ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ದ್ರಾವಿಡ್ ಅವರ ನೇತೃತ್ವದಲ್ಲಿ ಭಾರತ ಆಡಿದ ಪಂದ್ಯಗಳಲ್ಲಿ ಶೇಕಡಾ ೭೧ರಷ್ಟು ಗೆಲುವು ದಾಖಲಿಸಿವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದು ಈವರೆಗೆ ಕೋಚ್ ಆಗಿ ಕಾರ್ಯನಿರ್ವಹಿಸಿದವರಲ್ಲಿ ಅತೀ ಹೆಚ್ಚು ಗೆಲುವು ತಂದುಕೊಟ್ಟ ಕೋಚ್ ಆಗಿ ಹೊರಹೊಮ್ಮಿದ್ದಾರೆ.
Comments
Post a Comment