ಸೂರ್ಯ ಕುಮಾರ್ ಯಾದವ್ ಕೊಹ್ಲಿ ಹಾಗೂ ರೋಹಿತ್ ಬಳಿಕ ಭಾರತ ತಂಡವನ್ನು ಟಿ೨೦ ಮಾದರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತು ಕೊಂಡಿರುವ ಹೊಸ ನಾಯಕ. ಭಾರತ ತಂಡ ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಜಯಭೇರಿಯನ್ನು ದಾಖಲಿಸಿ ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಹಾಗೂ ಕೊಹ್ಲಿ ಟಿ೨೦ ಮಾದರಿಗೆ ವಿದಾಯ ಘೋಷಿಸಿದರು. ಆ ಬಳಿಕ ಯಾರಿಗೆ ಭಾರತದ ನಾಯಕತ್ವ ದೊರೆಯಲಿದೆ ಎಂಬ ಪ್ರಶ್ನೆ ಸಹಜವಾಗಿ ಕಾಣಿಸಿಕೊಂಡಿತು ಅದರೆ ಆಚ್ಚರಿಯೆಂಬಂತೆ ಸೂರ್ಯ ಕುಮಾರ್ ಯಾದವ್ ಆ ಸ್ಥಾನಕ್ಕೆ ಆಯ್ಕೆಯಾದರು.
ವಿಶ್ವ ಕ್ರಿಕೆಟ್ ನಲ್ಲಿ ಟಿ೨೦ ಮಾದರಿಯ ಕ್ರಿಕೆಟ್ ಗೆ ಹೆಸರುವಾಸಿಯಾಗಿರುವ ಸೂರ್ಯ ಪೂರ್ಣ ಪ್ರಮಾಣದ ನಾಯಕನಾಗಿ ಶ್ರೀಲಂಕಾ ವಿರುದ್ದ ಮೊದಲ ಪಂದ್ಯವನ್ನು ಮುನ್ನಡೆಸಿದರು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ನಾನು ಒರ್ವ ಸಮರ್ಥ ನಾಯಕನೆಂದು ವಿಶ್ವಕ್ಕೆ ತೋರಿಸಿಕೊಟ್ಟರು ಮಾತ್ರವಲ್ಲದೆ ಇದೇ ಪಂದ್ಯದಲ್ಲಿ ಹೊಸ ವಿಶ್ವದಾಖಲೆಯನ್ನು ಬರೆದರು.
ಶ್ರೀಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು ಮಾತ್ರವಲ್ಲದೆ ಇದು ಹೊಸ ವಿಶ್ವದಾಖಲೆಗೆ ಕಾರಣವಾಯ್ತು. ಇಲ್ಲಿಯವರೆಗೆ ಕೊಹ್ಲಿಯ ಹೆಸರಿನಲ್ಲಿದ್ದ ಈ ದಾಖಲೆಯನ್ನು ಸೂರ್ಯ ತಮ್ಮ ಹೆಸರಿಗೆ ಹಾಕಿಸಿಕೊಳ್ಳುವ ಮೂಲಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಟಿ೨೦ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಸರಿಗೆ ಖ್ಯಾತರಾಗಿದ್ದಾರೆ. ಸುಮಾರು ೧೬ ಬಾರಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಅದು ಅತೀ ಕಡಿಮೆ ಪಂದ್ಯಗಳಲ್ಲಿ
Comments
Post a Comment