ಟಿ20 ವಿಶ್ವಕಪ್ ನಲ್ಲಿ ಭಾರತೀಯ ನಾಯಕನಾಗಿ ಹೊಸ ಐತಿಹಾಸಿಕ ದಾಖಲೆ ಬರೆದ ಹಿ.ಟ್ ಮ್ಯಾನ್ ರೋಹಿತ್



ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಅದ ಛಾಪು ಮೂಡಿಸುವ ಮೂಲಕ ಹೊಸ ಅಧ್ಯಾಯವನ್ನು ಬರೆದ ಶ್ರೇಷ್ಠ ಆಟಗಾರ. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ದೈತ್ಯ ಪ್ರತಿಭೆ. ದೇಹದ ತೂಕ ಹಾಗೂ ಇನ್ನಿತರ ಯಾವುದೇ ಅಂಶಗಳು ಪ್ರತಿಭೆ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಆಟಗಾರ. ಒಂದು ಕಾಲದಲ್ಲಿ ಶತಕ ಬಾರಿಸುವುದು ಕಷ್ಟವಾಗಿತ್ತು ಅದರೆ ಈತನ ಹೆಸರಿನಲ್ಲಿ ಮೂರು ಮೂರು ದ್ವಿಶತಕಗಳು ಇದೇ ಎಂದರೆ ಈ ವ್ಯಕ್ತಿ ಎಂತಹ ಪ್ರತಿಭೆ ಎಂದು ನೀವೂ ತಿಳಿದುಕೊಳ್ಳಬೇಕು.

ಭಾರತ ತಂಡದಲ್ಲಿ ಆರಂಭಿಕ ಹಂತದಲ್ಲಿ ಬ್ಯಾಟ್ ಬೀಸಲು ಆರಂಭಿಸಿದ ಮೇಲೆ ರೋಹಿತ್ ಶರ್ಮಾ ಅವರ ಲಕ್ ಬದಲಾಯ್ತು. ಅಲ್ಲಿಯ ತನಕ ಶರ್ಮಾ ನಾಗಿದ್ದ ರೋಹಿತ್ ಅಮೇಲೆ ಹಿಟ್ ಮ್ಯಾನ್ ಎಂದು ಖ್ಯಾತಿ ಗಳಿಸಿದರು. ಐಪಿಎಲ್ ನಲ್ಲಿ ಅಮೋಘ ಹಾಗೂ ದಾಖಲೆಯ ಐದು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತಾನು ಒರ್ವ ನಿಜವಾದ ನಾಯಕ ಎಂದು ಎಲ್ಲಾರಿಗೂ ತೋರಿಸಿಕೊಟ್ಟರು ಇದೇ ಕಾರಣಕ್ಕಾಗಿ ಭಾರತ ತಂಡದ ನಾಯಕನಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂತು. ೨೦೨೩ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಸತತ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ ಈತ ಕೊನೆಯ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಭಾರತ ಪ್ರಶಸ್ತಿ ವಂಚಿತವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಳ್ಳುವಂತಯ್ತು. ಅದರೆ ಭಾರತದ ಆಭಿಮಾನಿಗಳು ರೋಹಿತ್ ಶರ್ಮಾ ಹಾಗೂ ತಂಡದ ಪ್ರದರ್ಶನವನ್ನು ಕಂಡು ಆ ದಿನ ನಮ್ಮದಾಗಿರಲಿಲ್ಲ ಇಲ್ಲಿ ಯಾರನ್ನೂ ದೂಷಿಸುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಕ್ರಿಕೆಟ್ ದಿಗ್ಗಜರಿಗೆ ತಮ್ಮ ಪ್ರೀತಿಯ ಮೂಲಕ ತಿಳಿಸಿದರು.

೨೦೨೩ರ ಸಂಧರ್ಭ ಮತ್ತೇ ಮರುಕಳಿಸಿದೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ದೇಶಗಳು ಜಂಟಿಯಾಗಿ ಟಿ೨೦ ವಿಶ್ವಕಪ್ ಆಯೋಜನೆ ಮಾಡಿದೆ. ಮಾತ್ರವಲ್ಲದೆ ಭಾರತ ಉತ್ತಮ ಪ್ರದರ್ಶನದ ಮೂಲಕ ಸೆಮಿ ಫೈನಲ್ ಹಂತವನ್ನು ತಲುಪಿದೆ. ಈ ನಡುವೆ ಭಾರತವನ್ನು ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋಲಿಸಿದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಮನೆಗೆ ಕಳುಹಿಸಿದ್ದಾರೆ. ಆಸ್ಟ್ರೇಲಿಯಾ ನಡುವಿನ ಸೂಪರ್ ೮ರ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯುತವಾದ ಆಟವಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು ಮಾತ್ರವಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನಾರದರು.

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ, ಭಾರತೀಯ ನಾಯಕನಾಗಿ ಟಿ೨೦ ವಿಶ್ವಕಪ್ ನಲ್ಲಿ ಪಂದ್ಯ ಶ್ರೇಷ್ಥ ಪ್ರಶಸ್ತಿ ಪಡೆದ ಮೊದಲ ನಾಯಕ ಎಂಬ ಖ್ಯಾತಿ ಗಳಿಸಿದ್ದಾರೆ. ಮಾತ್ರವಲ್ಲದೆ ಈ ದಾಖಲೆಯನ್ನು ಬರೆದ ಭಾರತದ ಮೊದಲ ನಾಯಕ ರೋಹಿತ್ ಶರ್ಮಾ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದೇ ಪಂದ್ಯದಲ್ಲಿ ಸುಮಾರು ೧೭ಕ್ಕೂ ಅಧಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಇಲ್ಲಿ ಮತ್ತೊಂದು ವಿಶೇಷ.

Comments