ವಿಶ್ವಕಪ್ ಈ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹೆಸರು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ ದೇಶಗಳ ನಡುವೆ ನಡೆಯುವ ಈ ಪಂದ್ಯಕೂಟದಲ್ಲಿ ಎಲ್ಲಾರೂ ಒಂದು ವಿಶ್ವಕಪ್ ಗಾಗಿ ಹೋರಾಡುತ್ತಾರೆ. ಏಕದಿನ ವಿಶ್ವಕಪ್ ಹಾಗೂ ಟಿ೨೦ ವಿಶ್ವಕಪ್ ಗಳು ಪ್ರಮುಖ ವಿಶ್ವಕಪ್ ಟೂರ್ನಿಗಳಾಗಿವೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತ್ತು, ಬಲಿಷ್ಠ ಆಸ್ಟ್ರೇಲಿಯಾ ಆಚ್ಚರಿಯ ಮೂಲಕ ತನ್ನ ವಿಶ್ವಕಪ್ ನಲ್ಲಿ ಸಾಮಾರ್ಥ್ಯವನ್ನು ಸಾಭೀತುಪಡಿಸಿ ವಿಶ್ವಕಪ್ ಮುಡಿಗೆರಿಸಿಕೊಂಡಿತು. ಸದ್ಯ ವಿಶ್ವಕಪ್ ನ ಮತ್ತೊಂದು ಪ್ರಮುಖ ಟೂರ್ನಿ ಆರಂಭವಾಗಲಿದೆ.
ಟಿ೨೦ ವಿಶ್ವಕಪ್ ಈ ಬಾರಿ ಮತ್ತೊಮ್ಮೆ ಆರಂಭವಾಗಲಿದೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಈ ಬಾರಿ ಕ್ರೀಡಾಕೂಟ ನಡೆಯುವ ಮೂಲಕ ಹಲವಾರು ಆಚ್ಚರಿಯ ಸಂಗತಿಗಳಿಗೆ ಕಾರಣವಾಗಲಿದೆ. ಅಮೆರಿಕಾದಲ್ಲಿ ಕ್ರಿಕೆಟ್ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಆ ದೇಶದಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿದೆ. ಈ ಮೂಲಕ ಕ್ರಿಕೆಟ್ ನ ಮತ್ತೊಂದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ. ಭಾರತ ಹಾಗೂ ಆಸ್ಟ್ರೇಲಿಯಾದಂತಹ ತಂಡಗಳು ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳಾಗಿದ್ದು ಬಹಳಷ್ಟು ಕೌತುಕತೆಯಂದ ಎಲ್ಲಾರೂ ಕಾಯುತ್ತಿದ್ದಾರೆ.
೨೦೦೭ ಟಿ೨೦ ಹಾಗೂ ೨೦೧೧ ಏಕದಿನ ವಿಶ್ವಕಪ್ ನ ಹಿರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲು ತನ್ನ ಬಲಿಷ್ಠ ಪ್ಲೇಯಿಂಗ್ ೧೧ ತಂಡವನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ ಲೋಕದ ದಿಗ್ಗಜರು ತಮ್ಮ ಬಲಿಷ್ಠ ತಂಡವನ್ನು ಟೂರ್ನಿಯ ಆರಂಭಕ್ಕೂ ಮೊದಲು ಪ್ರಕಟಿಸುವುದು ವಾಡಿಕೆ ಅದೇ ರೀತಿ ಯುವಿಯವರು ಕೂಡ ತನ್ನ ತಂಡವನ್ನು ಪ್ರಕಟಿಸಿದ್ದಾರೆ.
Credit: Kannada Sports Expert
Comments
Post a Comment