ಮಹೇಂದ್ರ ಸಿಂಗ್ ಧೋನಿ ಅಥವಾ ಎಂ.ಎಸ್ ಧೋನಿ ಈ ಹೆಸರು ವಿಶ್ವದ ಕ್ರಿಕೆಟ್ ಇತಿಹಾಸದಲ್ಲಿ ಜನಪ್ರಿಯ ಹೆಸರು ಅದರಲ್ಲಿಯೂ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಹೆಸರು. ಭಾರತದಲ್ಲಿ ಕ್ರಿಕೆಟ್ ಇಂದು ಇಷ್ಟರ ಮಟ್ಟಿಗೆ ಜನಪ್ರಿಯವಾಗಲು ಸಚಿವ್, ಗಂಗೂಲಿ, ದ್ರಾವಿಡ್ ಹಾಗೂ ಇನ್ನೂ ಆನೇಕರ ಜೊತೆಗೆ ಎಂ.ಎಸ್ ಧೋನಿ ಕೂಡ ಕಾರಣರು.
ಭಾರತಕ್ಕೆ ಟಿ೨೦ ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ ಐಪಿಎಲ್ ನಲ್ಲಿ ಮಾತ್ರ ಆಡುತ್ತಿರುವ ಮಾಹಿ ಇನ್ನು ಮುಂದೆ ಐಪಿಎಲ್ ಆಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮ ಆಚ್ಚರಿಯ ಬಯಕೆಯೊಂದನ್ನು ಹೇಳಿ ಕೊಂಡಿದ್ದಾರೆ.
ಧೋನಿಯವರು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಬಹುದು ಎಂಬ ಮಾತನ್ನು ಹೇಳಿದ್ದಾರೆ. ಸದ್ಯ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನ ಹುಡುಕಾಟದಲ್ಲಿದ್ದಾರೆ ಈ ನಡುವೆ ರಾಜ್ ಶರ್ಮ ಅವರ ಮಾತು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಧೋನಿ ನಾಯಕನಾಗಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ ಸದ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿ, ಉತ್ತಮ ಸಾಧನೆ ಮಾಡುವಂತೆ ಮಾಡಿದರೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ.
Comments
Post a Comment