ಅಜಿತ್ ಹನುಮಕ್ಕನವರ್ ಈ ಹೆಸರು ಕೇಳಿದ ತಕ್ಷಣ ಎಲ್ಲಾರೂ ಒಂದು ಸಲ ಈ ವ್ಯಕ್ತಿ ಏನು ಹೇಳ್ತಾರೆ ಅಂತ ಒಂದು ಸಲ ಟಿವಿ ಕಡೆ ಮುಖ ಮಾಡ್ತಾರೆ. ಮಾಧ್ಯಮ ಲೋಕದಲ್ಲಿ ದಶಕಗಳ ಕಾಲ ಅ-ಪರಾ-ಧ ವಿಭಾಗದ ರಿಪೋರ್ಟರ್ ಆಗಿ ಕೆಲಸ ಮಾಡಿ ಸದ್ಯ ಸುವರ್ಣ ನ್ಯೂಸ್ ನ ಕನ್ನಡ ವಿಭಾಗ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ.
ಸುವರ್ಣ ನ್ಯೂಸ್ ಅವರ್ ಸ್ವೇಷಲ್ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಅಜಿತ್ ಅವರು ನಡೆಸಿಕೊಡುತ್ತಾರೆ. ರಾಜಕೀಯ ವ್ಯಕ್ತಿಗಳು ಹಾಗೂ ಇನ್ನಿತರ ವ್ಯಕ್ತಿಗಳನ್ನು ಕರೆಸಿ, ಸಾಮಾನ್ಯ ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಮಾತಿನ ಮಂಥನದಿಂದ ಸತ್ಯ ಯಾವುದು ಸುಳ್ಳು ಯಾವುದು ಎಂಬ ಮಾಹಿತಿಯನ್ನು ಹೊರ ತೆಗೆಯುತ್ತಾರೆ.
ಈ ಕಾರ್ಯಕ್ರಮದಲ್ಲಿ ಹಲವಾರು ಸ್ವರಸ್ಯಕರ ಘಟನೆಗಳು ನಡೆಯುತ್ತಿರುತ್ತದೆ ಸದ್ಯ ಅಂತಹದೆ ಒಂದು ಘಟನೆ ನಡೆದಿದೆ. ಕಳೆದ ವಾರದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉ-ಪ ಮು-ಖ್ಯ-ಮಂ-ತ್ರಿ ಡಿ.ಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಮು-ಖ್ಯ ಅತಿಥಿಯನ್ನಾಗಿ ಕರೆಸಲಾಗಿತ್ತು ಈ ಸಂಧರ್ಭದಲ್ಲಿ ಮಾತಿನ ಮಧ್ಯದಲ್ಲಿ ನಿಮ್ಮಂತವರು ನನ್ನ ಜೊತೆ ಇರಬೇಕು, ನಿಮ್ಮ ಮಾತು ಹಾಗೂ ಚರ್ಚೆಯ ದಾಟಿ ಮತ್ತು ನಿಮ್ಮಲ್ಲಿರುವ ಜ್ನಾನ ನನಗೆ ಬಹಳ ಖುಷಿ ಕೊಟ್ಟಿದೆ. ನಿಮ್ಮಂತವರು ನನ್ನ ಜೊತೆ ಇರಬೇಕು ಎಂದು ಬಯಸುತ್ತೇನೆ ಎಂದು ಹೇಳಿದರು. ಇದಕ್ಕೆ ಅಜಿತ್ ಅವರು ಮುಗುಳ್ನಕ್ಕು ಸುಮ್ಮನಾದರು.
ತಮ್ಮ ಪ್ರಖರವಾದ ಮಾತಿನ ಮೂಲಕ ಜನರ ಮನಸ್ಸು ಗೆದ್ದಿರುವ ಅಜಿತ್ ಅವರು ಉಪಮುಖ್ಯಮಂತ್ರಿಗಳ ಮನಸ್ಸು ಗೆದ್ದಿರುವುದರಲ್ಲಿ ಆಶ್ಚರ್ಯವೆನಿಲ್ಲ ಬಿಡಿ ಎಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ.
Comments
Post a Comment