ಸುವರ್ಣ ನ್ಯೂಸ್ ಗೆ ರಾಷ್ಟ್ರೀಯ ಪ್ರಶಸ್ತಿಗಳ ಗರಿ.! ಪಡೆದುಕೊಂಡ ಒಟ್ಟು ಪ್ರಶಸ್ತಿಗಳ ಸಂಖ್ಯೆ ಎಷ್ಟು ಗೊತ್ತಾ



ಭಾರತದ ಸಂವಿಧಾನದಲ್ಲಿ ಮುಖ್ಯವಾಗಿ ಮೂರು ಅಂಗಗಳನ್ನು ನಾವು ಗುರುತಿಸುತ್ತೇವೆ ಅವುಗಲೆಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ. ಸಂವಿಧಾನದ ನಾಲ್ಕನೇ ಅಂಗವೆಂದು ಗುರುತಿಸಲ್ಪಡುವುದೇ ಮಾಧ್ಯಮ. ಮಾಧ್ಯಮ ರಂಗದಲ್ಲಿ ಪತ್ರಿಕೋದ್ಯಮ, ದೃಶ್ಯ ಮಾಧ್ಯಮ, ಡಿಜಿಟಲ್ ಮಾಧ್ಯಮ ಹಾಗೂ ಆನೇಕ ರೀತಿಯ ಮಾಧ್ಯಮಗಳನ್ನು ಒಳಗೊಂಡಿದೆ. 

ಕರ್ನಾಟಕದಲ್ಲಿ ಪ್ರಸ್ತುತ ಅದೆಷ್ಟೋ ಮಾಧ್ಯಮಗಳು ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಸಮಾಜದ ಅದೆಷ್ಟೋ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಸರ್ಕಾರ ಹಾಗೂ ಮುಖ್ಯ ವಾಹಿಗಳ ಗಮನಕ್ಕೆ ತರುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಕೂದ ಹೆಚ್ಚಾಗಿ ಪ್ರಚಾರಕ್ಕೆ ಬರುತ್ತಿದ್ದು, ದೇಶದ ಯಾವುದೇ ಮೂಲೆಯಲ್ಲಿ ಘಟನೆಗಳು ಸಂಭವಿಸಿದರು ಕ್ಷಣ ಮಾತ್ರದಲ್ಲಿ ತಿಳಿಯುವ ಮಟ್ಟಿಗೆ ಸುದ್ದಿ ಮಾಧ್ಯಮಗಳು ಬೆಳೆದು ನಿಂತಿದೆ.

ಮಾಧ್ಯಮ ರಂಗದಲ್ಲಿ ಬಹಳಷ್ಟು ಪೈಪೋಟಿಗಳು ನಡೆಯುತ್ತಿವೆ ನಾ ಮುಂದು ತಾ ಮುಂದು ಎಂಬಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ಸುದ್ದಿ ಮಾಧ್ಯಮಗಳು ಆರಂಭಿಸುತ್ತಿವೆ. ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಕಷ್ಟಗಳಿಗೆ ಮಾಧ್ಯಮಗಳು ಬೆನ್ನೆಲುಬಾಗಿ ನಿಂತು ಸಹಾಯವನ್ನು ಮಾಡಲು ಸಹಕಾರಿಯಾಗುತ್ತದೆ. ಅಂತಹ ಮಾಧ್ಯಮಗಳಲ್ಲಿ ಪ್ರಮುಖವಾದುದು ಸುವರ್ಣ ನ್ಯೂಸ್ ಕೂಡ ಒಂದು. ಬಿಗ್ ೩, ನ್ಯೂಸ್ ಹವರ್ ನಂತಹ ಯಶಸ್ಸು ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಮನೆಮಾತಾಗಿದೆ.

ಮಾಧ್ಯಮಗಳ ವಿಶೇಷ ಕಾರ್ಯಕ್ರಮಗಳನ್ನು ಗುರುತಿಸಿ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸದ್ಯ ಪ್ರತಿಷ್ಟಿತ ENBA ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸುಮಾರು ೯ ಪ್ರಶಸ್ತಿಗಳನ್ನು ಕನ್ನಡದ ಸುವರ್ಣ ನ್ಯೂಸ್ ಬಾಚಿಕಂಡಿದೆ. ಬಿಗ್ ೩, ನ್ಯೂಸ್ ಹವರ್, ಸಿನಿಮಾ ಹಂಗಾಮ್ ಹಾಗೂ ಅತ್ಯುತ್ತಮ ನ್ಯೂಸ್ ಅಂಕರ್ ಹಾಗೂ ನ್ಯೂಸ್ ಕವರೇಜ್ ಸೇರಿದಂತೆ ಒಟ್ಟು ೯ ಪ್ರಶಸ್ತಿಯನ್ನು ಸುವರ್ಣ ನ್ಯೂಸ್ ಬಾಚಿಕೊಂಡಿದೆ. ಒಟ್ಟಾರೆಯಾಗಿ ಕನ್ನಡ ಸುವರ್ಣ ನ್ಯೂಸ್ ನ ಮುಡಿಗೆ ಮತ್ತೊಂದು ಗರಿ ಬಂದಿರುವುದು ಎಲ್ಲಾರಿಗೂ ಖುಷಿಯ ವಿಚಾರವಾಗಿದೆ. 


Comments