ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-೩ರ ಯಶಸ್ವಿಯಿಂದ ಭಾರತವೂ ವಿಶ್ವ ಮಟ್ಟದಲ್ಲಿ ಭಾರೀ ಜನಮನ್ನಣೆಯನ್ನು ಗಳಿಸಿದೆ. ಚಂದ್ರನ ಮೇಲ್ಮೈಯಲ್ಲಿ ಇಳಿದ ನಾಲ್ಕನೇ ದೇಶವಾಗಿ ಹಾಗೂ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಮಾತ್ರವಲ್ಲದೆ ಭಾರತದ ಈ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಭಾರತದ ಚಂದ್ರಯಾನ-೩ ಉದ್ದೇಶ ಯಶಸ್ವಿಯಾಗಿ ನಡೆಯುತ್ತಿದ್ದು, ಚಂದ್ರನ ಮೇಲ್ಮೈಯಲ್ಲಿ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ದೇಶವಾಸಿಗಳಿಗೆ ಮತ್ತಷ್ಟು ಖುಷಿ ನೀಡಿದೆ.
ಚಂದ್ರಯಾಣ-೩ ರಲ್ಲಿ ಭಾರತದ ವಿಜ್ನಾನ ಕ್ಷೇತ್ರದ ಸಾಧನೆ ಮತ್ತಷ್ಟು ಹೆಚ್ಚುವುದರ ಜೊತೆಗೆ ಹಲವಾರು ಹಿರಿಮೆಗೆ ಪಾತ್ರವಾಗಿದೆ. ಭಾರತದ ಚಂದ್ರಯಾನ-೩ ಮಿಷನ್ ಕಳೆದ ಆಗಸ್ಟ್ ೨೩ರ ಸಂಜೆ ೬.೦೪ ನಿಮಿಷಕ್ಕೆ ನಡೆಯಿತು, ಇದರ ಸಂಪೂರ್ಣ ದೃಶ್ಯವನ್ನು ಇಸ್ರೋ ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿತ್ತು ಇದು ಅತೀ ಹೆಚ್ಚು ವೀಕ್ಷಣೆ ಪಡೆದ ಲೈವ್ ವಿಡಿಯೋ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ದಾಖಲೆಯ ಜೊತೆಗೆ ಚಂದ್ರಯಾನ-೩ ಕ್ರಿಕೆಟ್ ಜಗತ್ತಿನ ರನ್ ಮೆಷಿನ್ ಎಂದು ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದೆ ಎಂದರೆ ಆಚ್ಚರಿ ಪಡಬೇಕಾಗಿಲ್ಲ.
ಇಸ್ರೋ ಆಗಸ್ಟ್ ೨೩ಕ್ಕೆ ಚಂದ್ರನ ಮೇಲೆ ತಲುಪಿದ ಸಂಧರ್ಭದಲ್ಲಿ 'ನಾನು ನನ್ನ ಗುರಿಯನ್ನು ತಲುಪಿದೆ' ಮತ್ತೇ ನೀವೂ ಎಂಬ ಶೀರ್ಷಿಕೆಯಲ್ಲಿ ಟ್ವಿಟರ್ ನಲ್ಲಿ ಒಂದು ಪೋಸ್ಟ್ ಮಾಡಲಾಗಿತ್ತು ಇದು ಅತೀ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ಕೀರ್ತಿಗೆ ಪಾತ್ರವಾಗಿದೆ ಮಾತ್ರವಲ್ಲದೆ ಇದು ವಿರಾಟ್ ಕೊಹ್ಲಿ ಕಳೆದ ಟಿ೨೦ ವಿಶ್ವಕಪ್ ಸಂಧರ್ಭದಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಬಳಿಕ ವಿರಾಟ್ ಕೊಹ್ಲಿಯವರ ಪೋಸ್ಟ್ ಅತೀ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಗಿತ್ತು ಅದರೆ ಸದ್ಯ ಚಂದ್ರಯಾನ-೩ ಕಿಂಗ್ ಕೊಹ್ಲಿಯ ದಾಖಲೆಯನ್ನು ಮುರಿದಿದೆ.
Comments
Post a Comment